ಸೆಮಿಟಿಕ್ ಭಾಷೆಗಳು

	ಆಫ್ರೋ-ಏಷ್ಯಾಟಿಕ್ ಭಾಷಾವರ್ಗಕ್ಕೆ ಸೇರಿರುವ ಭಾಷೆಗಳನ್ನೊಳಗೊಂಡ ಉತ್ತರ ಆಫ್ರಿಕ ಮತ್ತು ನೈಋತ್ಯ ಏಷ್ಯ ರಾಷ್ಟ್ರಗಳ ಪ್ರಮುಖ ಭಾಷಾಕುಟುಂಬ. ನೋಹನ ಹಿರಿಯಮಗ ಸೆಮ್ ಎಂಬಾತ ನೈಋತ್ಯ ಏಷ್ಯದ ಜನಸಮೂಹದ ಮೂಲಪುರುಷ ನೆಂಬುದು ಈ ಭಾಷಾವರ್ಗಕ್ಕೆ ಈ ಹೆಸರು ಬರಲು ಕಾರಣ. ಈ ವರ್ಗವನ್ನು ಸಾಮಿ ಭಾಷಾವರ್ಗವೆಂದೂ ಕರೆಯುವರು. ಹೆಮಿಟಿಕ್ ಭಾಷಾಗುಂಪನ್ನೂ ಇದರೊಡನೆ ಸೇರಿಸಿ, ಹೆಮಿಟೊ-ಸೆಮಿಟಿಕ್ ಎನ್ನುವ ದೊಡ್ಡಗುಂಪನ್ನಾಗಿ ಮಾಡಿದ್ದಾರೆ. ಈ ಎರಡೂ ವರ್ಗದ ಭಾಷೆಗಳಲ್ಲೂ ಸಾಮ್ಯವುಂಟು. ಈ ಎರಡೂ ಗುಂಪಿನ ಭಾಷೆಗಳೂ ಶ್ಲಿಷ್ಟ ಯೋಗಾತ್ಮಕ ಭಾಷೆಗಳಾಗಿವೆ. ಈ ಭಾಷೆಗಳ ಸ್ವರ ಪರಿವರ್ತನೆ, ಪೂರ್ವ ಮತ್ತು ಅಂತ್ಯ ಪ್ರತ್ಯಯಗಳು ಸೇರುವುದರಲ್ಲಿ, ಬಹುವಚನ ಪ್ರತ್ಯಯ ಸೇರುವುದ ರಲ್ಲಿ, ಪುರುಷಾರ್ಥಕ ಸರ್ವನಾಮಗಳ ಮೂಲರೂಪಗಳಲ್ಲಿ ಹಲವು ಸಮಾನ ಲಕ್ಷಣಗಳಿವೆ. ಹೀಗಾಗಿ ಇವುಗಳ ಸಾದೃಶ್ಯ ಸ್ಪಷ್ಟವಾಗಿ ತಿಳಿದುಬರುತ್ತದೆ. ಈ ಪೈಕಿ ಅರಾಬಿಕ್ ಭಾಷೆ ಪ್ರಮುಖವಾದುದು. ಸಾಹಿತ್ಯ, ಧರ್ಮ, ದರ್ಶನ, ರಸಾಯನವಿಜ್ಞಾನ, ಗಣಿತವಿಜ್ಞಾನ, ಜ್ಯೋತಿಷ, ಖಗೋಳವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಅರೇಬಿಕ್ ಭಾಷೆ ವಿಸ್ತಾರವಾಗಿ ಬೆಳೆದು ಪ್ರಪಂಚದ ಹಲವಾರು ಭಾಷೆಗಳ ಮೇಲೆ ಪ್ರಭಾವ ಬೀರಿದೆ. ಎಲ್ಲ ಭಾಷೆಗಳೂ ಇದರಿಂದ ಪದಗಳನ್ನು ಎರವಲು ಪಡೆದಿವೆ.

	ಅರೇಬಿಕ್ ಭಾಷೆಯಲ್ಲಿ ಕಿiಣಟ ಎಂಬ ವ್ಯಂಜನಗಳ ಮೊತ್ತವನ್ನು ಧಾತುವೆಂದು ಪರಿಗಣಿಸಿದರೆ, ಅದರಿಂದ ರೂಪುಗೊಳ್ಳುವ ಕಿಚಿಣಚಿಟಚಿ (ಅವನು ಕೊಂದನು), ಕಿಚಿಣiಟಚಿ (ಅವನು ಕೊಲ್ಲಲ್ಪಟ್ಟನು), ಕಿಚಿಣiಟ (ಕೊಲೆ), ಕಿiಣಟ (ಶತ್ರು) ಎಂಬ ಪದಗಳಲ್ಲಿ ಪ್ರಕೃತಿ ಪ್ರತ್ಯಯಗಳನ್ನು ವಿಭಜಿಸಿ ತೋರಿಸುವುದು ಸುಲಭವಲ್ಲ. ಈ ಭಾಷೆ ಆಂತರಿಕ ಪ್ರಾತ್ಯಾಯಿಕ ವರ್ಗಕ್ಕೆ ಸೇರಿದೆ.

	ಸೆಮಿಟಿಕ್ ಭಾಷೆಗಳ ಮೂಲಧಾತುಗಳು ಸಾಮಾನ್ಯವಾಗಿ ಮೂರು ವ್ಯಂಜನಾಕ್ಷರಗಳನ್ನು ಒಳಗೊಂಡಿರುತ್ತವೆ. ಈ ವ್ಯಂಜನಗಳಿಗೆ ಕೆಲವೊಮ್ಮೆ ಸ್ವರಗಳನ್ನು ಸೇರಿಸುವುದರಿಂದ ಅನೇಕ ಪದಗಳನ್ನು ನಿಷ್ಪನ್ನಗೊಳಿಸ ಬಹುದು. ಉದಾಹರಣೆಗೆ ಞಣb ಬರೆಯುವುದು > ಞiಣb, ಞಣib. ಈ ವರ್ಗದ ಭಾಷೆಗಳಲ್ಲಿ ಸಮಾಸಪದಗಳು ಇಲ್ಲವೆಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಸಮಾಸಪದಗಳು ಗೋಚರಿಸಿದರೆ, ಅದು ಕೇವಲ ವ್ಯಕ್ತಿ ವಾಚಕ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಸ್ತ್ರೀವಾಚಕ ಪ್ರತ್ಯಯತ್ ಎಂಬುದು. ಕೆಲವು ವೇಳೆ-ತ್ ಪ್ರತ್ಯಯ-ಹ್ ಆಗುವುದು. ಉದಾಹರಣೆಗೆ ಮಲಕ್(ರಾಜ), ಮಲಹ್ (ರಾಣಿ). ಸೆಮಿಟಿಕ್ ಭಾಷಾಗುಂಪನ್ನು ಬೇರೆ ಬೇರೆ ಗುಂಪುಗಳನ್ನಾಗಿ ವರ್ಗೀಕರಿಸಿದ್ದಾರೆ, ಅರಬ್ಬಿ, ಅರಮಮಾಯಿಕ್ ಕೆನನಾಯಿಟ್, ಅಕ್ಕಾಡಿಯನ್ ಮುಂತಾದುವು. 	
											     (ಆರ್.ಎಮ್.ಕೆ.)